ರಮೇಶ್ ಜಾರಕಿಹೊಳಿ ಕೆನ್ನೆ ಸವರಿದ ಎಚ್ ಡಿ ಕೆ | ಈ ಕಡೆ ಸತೀಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ

2018-09-15 1,118

HD Kumaraswamy visited first time to Belagavi after becoming CM for second term. Ramesh Jarkiholi welcomed him. Satish Jarkiholi and Lakshmi Hebbalkar seen sitting besides and talking each other.


ಬೆಳಗಾವಿ ರಾಜಕೀಯ ಜಿದ್ದಾಜಿದ್ದಿನ ಕಾದಾಟ ಶನಿವಾರ ಹೊಸ ಪ್ರಹಸನಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಬೆಳಗಾವಿಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತೆರಳಿದ್ದರು. ತಮಗೆ ಹೂವಿನ ಬೊಕ್ಕೆ ನೀಡಿದ ರಮೇಶ್ ಅವರನ್ನು ಕುಮಾರಸ್ವಾಮಿ ನಗುತ್ತಾ ಗಲ್ಲ ಸವರಿ ಮಾತನಾಡಿಸಿದರು. ಬೊಕ್ಕೆ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಮತ್ತೆ ಎರಡೂ ಕೈಗಳಿಂದ ಕೆನ್ನೆ ಸವರಿದರು. ಇದರಿಂದ ರಮೇಶ್ ಸ್ವಲ್ಪ ಮುಜುಗರಕ್ಕೆ ಒಳಗಾದಂತೆ ಕಂಡುಬಂದರೂ ನಗುತ್ತಾ ಮಾತನಾಡಿದರು.

Videos similaires